ಗಂಡು ಹೆಣ್ಣಿನ ‘ಸಂಬಂಧ’ದ ಕುರಿತ ಚಿತ್ರ ‘ರೆಡ್’
Posted date: 10 Thu, Mar 2016 – 10:05:54 AM

ಸಾಮಾನ್ಯವಾಗಿ ಯಾವುದೇ ಅಪರಾಧ ಪ್ರಕರಣಗಳು ನಡೆದಾಗ ಹೆಣ್ಣು, ಹೊನ್ನು, ಮಣ್ಣು ಎಂಬ ಮೂರು ಅಂಶಗಳಲ್ಲಿ ಒಂದು ಮೂಲ ಕಾರಣವಾಗಿರುತ್ತದೆ. ಚಲನಚಿತ್ರಗಳಲ್ಲಿ ಕೂಡಾ ಸಮಾಜದಲ್ಲಿ ನಡೆಯುವಂಥ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಚಿತ್ರಕಥೆಯನ್ನಾಗಿ ರೂಪಿಸಲಾಗುತ್ತದೆ. ಅದೇ ರೀತಿ ಚಂಚಲ ಮನಸ್ಸಿನ ಹೆಣ್ಣೊಬ್ಬಳ ಕಥೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಲಾಗಿರುವ ಚಿತ್ರವೇ ‘ರೆಡ್’!  ‘ಷಡ್ಯಂತ್ರ ಮತ್ತು ‘ಮನಿ ಹನಿ ಶನಿ’ ಎಂಬೆರಡು ಚಿತ್ರಗಳನ್ನು ನಿರ್ದೇಶಿಸಿದ್ದ ರಾಜೇಶ್ ಮೂರ್ತಿ ಅವರ ಮತ್ತೊಂದು ಚಿತ್ರ ರೆಡ್ ಆಗಿದ್ದು, ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ಮಾಣ,  ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನ ಹಾಗೂ ಸಂಕಲನಕಾರನಾಗಿ ಕೂಡಾ ಕಾರ್ಯನಿರ್ವಹಿಸಿದ್ದಾರೆ. ಇದೀಗ ರೆಡ್ ಚಿತ್ರ ಬಿಡುಗಡೆ ಹಂತಕ್ಕೆ ತಲುಪಿದೆ. ಗಂಡ ಹೆಂಡತಿಯ ಸಂಬಂಧದಲ್ಲಿ ಸಣ್ಣ ಪುಟ್ಟ ಲೋಪ ದೋಷಗಳು ಸಹಜ. ಆದರೆ, ಅದನ್ನು ಸರಿಪಡಿಸಿಕೊಂಡು ಹೋಗಬೇಕಾದದ್ದು ಇಬ್ಬರ ಕರ್ತವ್ಯವಾಗಿರುತ್ತದೆ. ಆದರೆ ಹೆಣ್ಣು ದಾರಿ ತಪ್ಪಿದರೆ ದೊಡ್ಡ ಅನಾಹುತವೇ ನಡೆದುಹೋಗುತ್ತದೆ. ಆ ಹೆಣ್ಣು ತನ್ನಲ್ಲಿ ಹತ್ತಿಕ್ಕಿಕೊಳ್ಳಲಾಗದ ಮನೋಬಯಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಕೈ ಹಿಡಿದ ಗಂಡನ ಪ್ರಾಣವನ್ನೇ ತೆಗೆಸುವ ಹಂತಕ್ಕೆ ತಲುಪುತ್ತಾಳೆ ಎನ್ನುವ ಅಂಶಗಳು ‘ರೆಡ್’ ಚಿತದಲ್ಲಿ ಪ್ರಧಾನವಾಗಿವೆ.
ಕನ್ನಡ ಚಿತ್ರರಂಗದಲ್ಲಿ ಹಿರಿಯ ನಿರ್ಮಾಪಕರೂ, ವಿತರಕರೂ ಆಗಿರುವ ಕೆಸಿಎನ್ ಚಂದ್ರಶೇಖರ್ ಅವರು ಈ ಚಿತ್ರವನ್ನು ವೀಕ್ಷಿಸಿ ‘ಉತ್ತಮವಾದ ಕಥೆ ಇರುವಂಥ ಚಿತ್ರ’ವೆಂದು ಪ್ರಶಂಶಿಸಿದ್ದಾರಲ್ಲದೆ, ಚಿತ್ರದ ಸಂಪೂರ್ಣ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಚಿತ್ರದಲ್ಲಿ ಚಿತ್ರಕತೆಗೆ ಪೂರಕವಾದಂತೆ ಕೆಲವು ಚುಂಬನ ದೃಶ್ಯಗಳಿದ್ದರೂ ಎಲ್ಲೂ ಅಶ್ಲೀಲ ಎಂಬಂತೆ ತೋರಿಸಿಲ್ಲ. ‘ಕತೆಯ ಜೊತೆಗೆ ಅಂಥಾ ದೃಶ್ಯಗಳು ಸೇರಿರುವುದರಿಂದ ಎಲ್ಲೂ ಮುಜುಗರ ಹುಟ್ಟಿಸುವುದಿಲ್ಲ’ ಎಂಬುದು ಚಿತ್ರದ ನಿರ್ದೇಶಕ ರಾಜೇಶ್ ಮೂರ್ತಿ ಅಭಿಪ್ರಾಯ.
ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ. ಚಿತ್ರವನ್ನು ಇದೇ ತಿಂಗಳ ಅಂತ್ಯದಲ್ಲಿ ಅಥವಾ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ತೆರೆಗೆ ತರುವ ಸಿದ್ದತೆ ಮಾಡಿಕೊಂಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed